ಇಂದು ನಾವು ನಿಮ್ಮ ಗುರುಕುಲಕ್ಕೆ ಅಕಸ್ಮಾತಾಗಿ ಭೇಟಿ ನೀಡಿದೆವು. ನಮಗೆ ಇದರ ಬಗ್ಗೆ ಒಂದು ಕುತೂಹಲ ಖಂಡಿತ ಇತ್ತು. ಇಲ್ಲಿ ಒಂದು ನಿಮ್ಮ ಕಾರ್ಯವೈಖರಿಯನ್ನು ಪ್ರತ್ಯಕ್ಷವಾಗಿ ನೋಡಿದಾಗ ತುಂಬಾ ಸಂತಸವಾಯಿತು. ಈ ಕಾಲದ Money minded society ಒಂದು ಕಡೆಯಾದರೆ ನಿಮ್ಮ ಸಾಧನೆ ಮಾತ್ತೊಂದು ಕಡೆ. ನೀವು ನಡೆಸುತ್ತಿರುವ ಗುರುಕುಲ ಅತ್ಯಂತ ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ ಮತ್ತು ನಿಜವಾದ ಭಾರತೀಯ ಸಂಸ್ಕೃತಿ ಏನನ್ನು ಹೇಳುತ್ತಿದೆಯೋ ಅದನ್ನು ನೀವು ಪಾಲಿಸುತ್ತಿದ್ದನ್ನು ಕಂಡು ತುಂಬಾ ಸಂತೋಷವಾಯಿತು. ಇದೇ ನಿಜವಾದ ಜೀವನಶೈಲಿ. ನಮ್ಮ ಗುರಿಯನ್ನು ಸ್ಥಾಪಿಸುವ ಮೊದಲು ನಾವು ಒಮ್ಮೆ ನಮ್ಮ ಸಂಸ್ಕೃತಿಯ ಬಗ್ಗೆ ನಮ್ಮ ಗುರುಕುಲ ಪದ್ಧತಿಯನ್ನು ಅರಿತು ವಿಚಾರ ಮಾಡಿ ಗುರಿಯನ್ನು ಸ್ಥಾಪಿಸಬೇಕು. ದುಡ್ಡನ್ನು ಗಳಿಸುವುದು ಬರೀ ಯಾಂತ್ರಕತೆ. ನಿಜವಾದ ಜೀವನಶೈಲಿಯನ್ನು ಬಯಸುವವರು ನಿಮ್ಮಲ್ಲಿ ತರಬೇತಿಯನ್ನು ಖಂಡಿತಾ ಪಡೆಯಲೇ ಬೇಕು ಎಂಬುದು ನನ್ನ ಅನಿಸಿಕೆ.