ಶಾಸ್ತ್ರ = ಜೀವನ, ಜೀವಿಕೆ ಅಲ್ಲ
ಪ್ರಕೃತ ಸಮಾಜದಲ್ಲಿ ಶಾಸ್ತ್ರ ಎನ್ನುವುದನ್ನು ಪದ ಮಾತ್ರದಿಂದ ಕೇಳಿದವರ ಸಮೂಹ ಒಂದು ಕಡೆಯಾದರೆ ಶಾಸ್ತ್ರವನ್ನು ತಿಳಿದವರು, ತಿಳಿಯುತ್ತಿರುವವರು ಇನ್ನೊಂದು ಕಡೆ. ಪ್ರವಾಹದ ಮಧ್ಯದಲ್ಲಿ ಸಿಕ್ಕಿರುವ ಮರದ ತುಂಡಿನಂತೆ, ಯಾಂತ್ರಿಕ ಜಗತ್ತಿನ ಮಧ್ಯದಲ್ಲಿ ಶಾಸ್ತ್ರಗಳ ಸ್ಥಿತಿ ಇದೆ. ಈ ದೃಷ್ಟಿಯಿಂದ ಅದಕ್ಕೆ ಪೂರಕ ವ್ಯವಸ್ಥೆಗಳು ಆಗುತಿದ್ದು ಕೆಲವರು ಶಾಸ್ತ್ರಾಧ್ಯಯನ ಮಾಡುತ್ತಾ ಅದನ್ನು ಉಳಿಸುವುದರಲ್ಲಿ ತೊಡಗಿದ್ದಾರೆ. ಹೀಗೆ ಶಾಸ್ತ್ರಗಳು ಪಾಠಶಾಲೆ, ಅದಕ್ಕೆ ಸಂಬಂಧಪಟ್ಟ ವಿಶ್ವವಿದ್ಯಾಲಯಗಳಿಂದ ಪ್ರಾರಂಭವಾಗಿ ಶಾಸ್ತ್ರಸಭೆ, ಶಾಸ್ತ್ರೀಯಪರೀಕ್ಷೆ, ಶಾಸ್ತ್ರೀಯಸ್ಪರ್ಧೆಗಳಲ್ಲಿ ಅಂತ್ಯವಾಗುತ್ತಾ ಇವೆ. ಶಾಸ್ತ್ರಗಳ ಪ್ರಕಟೀಕರಣ ಇವೇ ಮೂರು ಸ್ಥಾನಗಳಿಗೆ […]