ಶಾಸ್ತ್ರಾವಲೋಕನಮ್

Share:
Date: April 6, 2025
Past Events

ಮೈತ್ರೇಯೀ, ವೇದವಿಜ್ಞಾನ ಮತ್ತು ಪ್ರಬೋಧಿನೀ ಗುರುಕುಲದ ಭ್ರಾಜೋ ಹಾಗೂ ಯಶೋ ಗಣದ ಮಕ್ಕಳಿಗೆ “ಕರ್ನಾಟಕಗುರುಕುಲಪ್ರಕಲ್ಪ” ದ ವತಿಯಿಂದ ೫/೪/೨೦೨೫ ಹಾಗೂ ೬/೪/೨೦೨೫ ರಂದುಆಯೋಜಿಸಿದ್ದ ಶಾಸ್ತ್ರಾವಲೋಕನವು ಮೈತ್ರೇಯೀಗುರುಕುಲದಲ್ಲಿ ಸುಸಂಪನ್ನಗೊಂಡಿತು. ವೇದವಿಜ್ಞಾನ ಗುರುಕುಲದಿಂದ 14 ಮಕ್ಕಳು, ಪ್ರಬೋದಿನೀಗುರುಕುಲದಿಂದ 7 ಮಕ್ಕಳು ಆಗಮಿಸಿದ್ದರು. ತಾ:5/4/2025 ರಂದು 13 ಮಕ್ಕಳು ವೇದಾಂತಶಾಸ್ತ್ರಾವಲೋಕನವನ್ನು ನೀಡಿದ್ದರು. ವಿದ್ವಾಂಸರಾದ ಶಂಕರ ಭಟ್ ಹಾಗೂ ಮಹಾಬಲೇಶ್ವರ ಭಟ್ ಜ್ಞಾನಾವಲೋಕನವನ್ನು ಮಾಡಿ ಶಾಸ್ತ್ರ ಮಾರ್ಗದಲ್ಲಿ ಪ್ರೇರೇಪಿಸಿದರು.

ತಾ:೬/೪/೨೦೨೫ ರಂದು ವ್ಯಾಕರಣ, ನ್ಯಾಯ, ಮೀಮಾಂಸಾ, ಸಾಂಖ್ಯ, ಯೋಗ ಶಾಸ್ತ್ರಗಳ ಅವಲೋಕನ ನಡೆಯಿತು. 10 ಮಕ್ಕಳು ವ್ಯಾಕರಣ ಶಾಸ್ತ್ರದ ಅವಲೋಕನವನ್ನು ನೀಡಿದ್ದು, ಶಂಭುನಾಥಾಚಾರ್ಯ, ರವಿ ಆಚಾರ್ಯ, ವನಜಾ
ಮಾತೃಶ್ರೀ ಅವಲೋಕನವನ್ನು ಮಾಡಿದರು.

ಇಬ್ಬರು ಛಾತ್ರರು ಮೀಮಾಂಸಾವಲೋಕನವನ್ನು ನೀಡಿದ್ದು ಶ್ರುತಿಪ್ರಿಯಾಚಾರ್ಯ ಅವಲೋಕನವನ್ನು ಮಾಡಿದರು.

ಇಬ್ಬರು ನ್ಯಾಯಾವಲೋಕನವನ್ನು ನೀಡಿದ್ದು ಶ್ರುತಿಪ್ರಿಯಾಚಾರ್ಯ ಅವಲೋಕನವನ್ನು ಮಾಡಿದರು.

ಸಾಂಖ್ಯ ಯೋಗ ಶಾಸ್ತ್ರದ ಅವಲೋಕನವನ್ನು 7 ಛಾತ್ರರು ಕೊಟ್ಟಿದ್ದರು. ವಿದ್ವಾಂಸರಾದ ಕೋಟೆಮನೆ ರಾಮಚಂದ್ರಾಚಾರ್ಯ, ಜಯರಾಮಾಚಾರ್ಯ ಹಾಗೂ ಅನೀಶಾಚಾರ್ಯ ಅವಲೋಕನವನ್ನು ಮಾಡಿದರು.

2 ದಿನಗಳ ಶಾಸ್ತ್ರಾವಲೋಕನದ ಉಪಸಂಹಾರ ಶ್ರೀಯುತ ಕೋಟೆಮನೆ ರಾಮಚಂದ್ರ ಭಟ್ ಇವರ ಮಾತುಗಳ ಮೂಲಕ ಸಂಪ್ಪನ್ನಗೊಂಡಿತು. ಗುರುಕುಲದ ಪರೀಕ್ಷಾಪ್ರಣಾಳಿಯ ವೈಶಿಷ್ಟ್ಯ ತಿಳಿಸಿ ಅಧ್ಯಯನದಲ್ಲಿ ಕುಲಪರಂಪರೆಯಲ್ಲಿ ಮುನ್ನಡೆಯುವಂತೆ ಪ್ರೇರೇಪಿಸಿ ವಿದ್ಯಾರ್ಥಿಗಳ ಅಧ್ಯಯನಮಾರ್ಗಕ್ಕೆ ಪಾಥೇಯವನ್ನು ನೀಡಿದರು.