ಅಂತರಾಷ್ಟ್ರೀಯ ಯೋಗದಿನಾಚರಣೆ ಯ ನಿಮಿತ್ತ ಮೈತ್ರೇಯೀ ಗುರುಕುಲದಲ್ಲಿ ಜೂನ್ 21ನೇ ತಾರೀಖು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪ್ರತಿಭಾ ಮತ್ತು ಧೃತಿ ಗಣದ ಆರು ವಿದ್ಯಾರ್ಥಿನಿಯರು ಗಣೇಶನಮನ, ಚಂದ್ರನಮಸ್ಕಾರ, ಹನುಮವಂದನಾ, ಮಾತೃವಂದನಾ, ಗುರು ನಮಸ್ಕಾರ, ಸೂರ್ಯನಮಸ್ಕಾರ ಹೀಗೆ ಆರು ನಮಸ್ಕಾರಗಳನ್ನು ಪ್ರದರ್ಶಿಸಿದರು. ಮೇಧಾ ಗಣದಿಂದ ಧೃತಿ ಗಣದ ವರೆಗಿನ ಎಲ್ಲಾ ವಿದ್ಯಾರ್ಥಿನಿಯರು ಕ್ಲಿಷ್ಟಕರ ಆಸನಗಳಿಂದ ಕೂಡಿದ ಎರಡು ಗುಚ್ಛಗಳನ್ನು ಪ್ರದರ್ಶಿಸಿದರು. ತೇಜೋ ಮತ್ತು ಓಜೋಗಣದ ವಿದ್ಯಾರ್ಥಿನಿಯರು ಅಷ್ಟಾಂಗಯೋಗದಿಂದ ಅರಿಷಡ್ವರ್ಗಗಳ ನಾಶ ಹೇಗೆ ಎಂಬುವುದನ್ನು ನೃತ್ಯರೂಪಕದ ಮೂಲಕ ಪ್ರದರ್ಶಿಸಿದರು.ಕೊನೆಯಲ್ಲಿ ಗುರುಕುಲದ ಆಚಾರ್ಯರಾದ ಮಾಧವಾಚಾರ್ಯ ಯೋಗದ ಮಹತ್ವ ಮತ್ತು ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗ, ರಾಜಯೋಗಗಳಬಗ್ಗೆ ತಿಳಿಸಿಕೊಟ್ಟರು.