ದಶಮಃ ದೀಕ್ಷಾಂತ ಸಮಾರಂಭ.
ಮೈತ್ರೇಯೀಗುರುಕುಲದಲ್ಲಿ ದಿನಾಂಕ 14.4.2025 ರಂದು ದೀಕ್ಷಾಂತ ಕಾರ್ಯಕ್ರಮವು ಸುಸಂಪನ್ನವಾಯಿತು. ದಶಮ ದೀಕ್ಷಾಂತ ಸಮಾರೋಹದ ಈ ಸಂದರ್ಭದಲ್ಲಿ 10 ಜನ ವಿದ್ಯಾರ್ಥಿನಿಯರು ಗುರುಕುಲ ಶಿಕ್ಷಣದ ಆಶಂಸನಪತ್ರವನ್ನು ಪಡೆದುಕೊಂಡರು. ಬೆಳಗ್ಗೆ 8.30 ಕ್ಕೆ ಸರಸ್ವತೀಹವನದ ಮೂಲಕ ದೀಕ್ಷಾಂತವಿಧಿಯು ಆರಂಭವಾಯಿತು. ವಿದ್ಯಾಧಿದೇವತೆಯಾದ ಸರಸ್ವತಿಯ ಅನುಗ್ರಹ ಪಡೆದ ನಂತರ 10.30ಕ್ಕೆ ದೀಕ್ಷಾಂತ ಕಾರ್ಯಕ್ರಮದ ಸಭಾಕಾರ್ಯಕ್ರಮವು ಆರಂಭವಾಯಿತು. ದೀಕ್ಷಾಂತಪ್ರಬೋಧಕರಾಗಿ ಕರ್ನಾಟಕ ಗುರುಕುಲ ಪ್ರಕಲ್ಪದ ಸಂಯೋಜಕರಾದ ಡಾ. ಮಹಾಬಲೇಶ್ವರ ಭಟ್ ಉಪಸ್ಥಿತರಿದ್ದರು. ದೀಕ್ಷಾಂತ ಎಂದರೆ ದೀಕ್ಷೆಯ ನಿರ್ಣಯಘಟ್ಟ. ಸಮಾವರ್ತನವನ್ನು ಮುಗಿಸಿದ ಮಕ್ಕಳು ಸಮಾಜದ ಎಲ್ಲರಂತೆ ಪ್ರವಾಹದ […]