ಆಚಾರ್ಯ-ಮಾತೃಶ್ರೀ ಪ್ರಶಿಕ್ಷಣವರ್ಗ
ಕರ್ನಾಟಕ ಗುರುಕುಲ ಪ್ರಕಲ್ಪ ದಿನಾಂಕ 15-05-2024 ರಿಂದ 19-05-2024 ರವರೆಗೆಗುರುಕುಲಗಳ ಕಾರ್ಯಕಲಾಪಗಳಲ್ಲಿ ಆಚಾರ್ಯ-ಮಾತೃಶ್ರೀ ಪ್ರಶಿಕ್ಷಣವರ್ಗಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಆಯಾಯ ಗುರುಕುಲಗಳಲ್ಲಿ ಪ್ರತ್ಯೇಕವಾಗಿ ಮಾಸಿಕ ಪ್ರಶಿಕ್ಷಣದ ಸಂಯೋಜನೆಯಾಗುತ್ತಿದ್ದು, ವರ್ಷದಲ್ಲಿ ಒಂದುಬಾರಿ ಎಲ್ಲಾ ಗುರುಕುಲಗಳ ಆಚಾರ್ಯ-ಮಾತೃಶ್ರೀಯವರು ಸೇರಿ ಐದುದಿನಗಳ ವಾರ್ಷಿಕ ಪ್ರಶಿಕ್ಷಣ ನಡೆಸುವ ಪರಿಪಾಠವಿದೆ. ಈ ವರ್ಷ ಮೈತ್ರೇಯೀ ಗುರುಕುಲ, ಪ್ರಬೋಧಿನೀ ಗುರುಕುಲ, ವೆದವಿಜ್ಞಾನ ಗುರುಕುಲ, ಆಂಧ್ರಪ್ರದೇಶದ ಋಷಿವಾಟಿಕಾ ಗುರುಕುಲ ಮತ್ತು ಬೆಳಗಾವಿಯ ವೃಂದಾರಣ್ಯ ಗುರುಕುಲ ಹೀಗೆ ಒಟ್ಟು ಐದು ಗುರುಕುಲಗಳ 39 ಮಂದಿ ಆಚಾರ್ಯ-ಮಾತೃಶ್ರೀಯರ ಉಪಸ್ಥಿತಿ ಇತ್ತು. […]