ದೀಕ್ಷಾವಿಧಿ – 2023

Share:

ಭಾರತೀಯ ಪರಂಪರೆಯಲ್ಲಿ ವಿದ್ಯೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಹಾಗಾಗಿ ಗುರುಕುಲಕ್ಕೆ ಸೇರ್ಪಡೆಯಾಗುವ ಮಕ್ಕಳಿಗೆ ಶಾಸ್ತ್ರೋಕ್ತವಾಗಿ ದೀಕ್ಷೆಯನ್ನು ನೀಡಿ ವಿದ್ಯೆಯನ್ನು ಕಲಿಯಲು ಅವಕಾಶ ಮಾದಿಕೊಡುವ ಪರಂಪರೆಯಿದೆ. ಇದರ ಅನ್ವಯ ಗುರುಕುಲದಲ್ಲಿ ದಿನಾಂಕ ೨೧/೦೬/೨೦೨೩ ರಂದು ಬೆಳಿಗ್ಗೆ ೬.೦೦ ಗಂಟೆಗೆ ಪಂಚಗವ್ಯ ಹವನದೊಂದಿಗೆ ದೀಕ್ಷಾ ಸಮಾರಂಭವು ಆರಂಭಗೊಂಡಿತು.

ಮಕ್ಕಳಿಗೆ ದೀಕ್ಷೆಯನ್ನು ಗುರುಕುಲದ ಶ್ರೀಮತಿ ಮಾತೃಶ್ರೀ ಯವರು ನೀಡಿದರು.
ಒಟ್ಟು ಹದಿನಾರು ಮಕ್ಕಳು ಅಧಿಶೀಲ ಶಿಕ್ಷಣಕ್ಕೆ ಮತ್ತು ಇಬ್ಬರು ಅಧಿಪ್ರಜ್ನಶಿಕ್ಷಣಕ್ಕೆ ಸೇರ್ಪಡೆಗೊಂಡಿದ್ದಾರೆ.
ಸಭಾ ಕಾರ್ಯಕ್ರಮವು ವೇದಘೋಷದೊಂದಿಗೆ ಆರಂಭವಾಯಿತು. ನಂತರ ಮೈತ್ರೇಯಿಯ ಹುಟ್ಟು ಹಾಗೂ ಬೆಳೆದು ಬಂದ ರೀತಿ ಮತ್ತು ಈಗ ಪ್ರಸ್ತುತ ಶಿಕ್ಷಣದ ಅವಶ್ಯಕತೆಯ ಕಿರುಪರಿಚಯವನ್ನು ಶ್ರೀಯುತ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಇವರು ಪ್ರಾಸ್ತಾವಿಕ ಭಾಷಣದಲ್ಲಿ ತಿಳಿಸಿದರು.
ನಂತರ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಇವರು ಸತ್ಯಂ ವದ ಧರ್ಮಂ ಚರ ಎಂದು ನಡೆ ನುಡಿಗಳಲ್ಲಿ ಸಾಮ್ಯತೆ ಇರಬೇಕು ಎಂದು ಬೋಧಿಸಿದರು. ಹಾಗೆಯೇ ರಾಮಗಣಿತ ಸೂತ್ರದ ಮೂಲಕ ಚರಾಚರವಸ್ತುಗಳಲ್ಲಿಯೂ ರಾಮನಿದ್ದಾನೆ ಎಂದು ಮಾರ್ಮಿಕವಾಗಿ ಪ್ರತಿಪಾದಿಸಿದರು. ನಾವೆಲ್ಲಾ ಒಂದೊಂದು ದೀಪಗಳಾಗಿ ಬೆಳಗಬೇಕು ಎಂದು ಪ್ರಥಮ ಪಾಠವನ್ನು ಬೋಧಿಸಿದರು.

ಈ ಕಾರ್ಯಕ್ರಮದಲ್ಲಿ ಅಜೇಯ ವಿಶ್ವಸ್ತ ಮಂಡಳಿಯ ಸದಸ್ಯರು ಹಾಗೂ ಪಾಲಕರು ಉಪಸ್ಥಿತರಿದ್ದರು.
ವೈದಿಕರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಸಮಾಪ್ತಿಗೊಂಡಿತು.
ನಿರೂಪಣೆ ಮತ್ತು ಸ್ವಾಗತವನ್ನು ಕು. ಕೀರ್ತಿ, ಧನ್ಯವಾದಸಮರ್ಪಣೆಯನ್ನು ಕು. ದೇವಿಕಾ ಮಾಡಿದರು.