ವ್ಯಾಸಪೂರ್ಣಿಮೆಯ ದಿನ ಮೈತ್ರೇಯೀಗುರುಕುಲದ ಜನ್ಮದಿನವೂ ಹೌದು. ಈ ದಿನ ಮೈತ್ರೇಯೀ ಗುರುಕುಲವು 30ನೇ ವರ್ಷಕ್ಕೆ ಪಾದಾರ್ಪಣೆ ಮಾಡಿತು. ಆ ನಿಮಿತ್ತ 30 ಹಣತೆಗಳನ್ನು ಬೆಳಗಿಸಿ ಗುರುಕುಲದ ಜನ್ಮದಿನವನ್ನು ಸಂಭ್ರಮಿಸಲಾಯಿತು. ಶ್ರೀಮತಿ ಮಾತೃಶ್ರೀಯವರು ವ್ಯಾಸಪೂರ್ಣಿಮೆ ಮತ್ತು ಗುರುಕುಲದ ವಿಕಾಸದ ಹಾದಿಯ ಬಗ್ಗೆ ಕೆಲವು ಮಾತುಗಳನ್ನು ಆಡಿದರು