ಮಾತೃಶಕ್ತಿ ಸಂಗಮ – ವರದಿ – 2018

Share:
Date: December 25, 2018
Past Events

ಸ್ವಸ್ಥ ಸಮಾಜ ನಿರ್ಮಾಣಎಂಬಂತಹಉದ್ದೇಶವನ್ನಿಟ್ಟುಕೊಂಡುಆರಂಭವಾದ ಮೈತ್ರೇಯೀಗುರುಕುಲ 24 ವರ್ಷಗಳ ತನ್ನ ಪಯಣವನ್ನು ಮುಗಿಸಿ ಈ ವರ್ಷಅರ್ಧಮಂಡಲೋತ್ಸವವನ್ನುಆಚರಿಸುತ್ತಿದೆ. ಈ ಸಂದರ್ಭದಲ್ಲಿಉದ್ದೇಶದ ಸಾಕಾರಕ್ಕಾಗಿ ಮಾತೆಯರನ್ನು ಈ ಕೆಲಸದಲ್ಲಿ ಜೋಡಿಸಿಕೊಂಡು ಮಾತೃಶಕ್ತಿಯ ಸಹಕಾರದೊಂದಿಗೆಅದಮ್ಯ ಶಕ್ತಿಯಾಗಿ ಮುನ್ನಡೆಯಬೇಕೆಂಬ ಹಿನ್ನೆಲೆಯಲ್ಲಿ 25-12-2018 ರಂದುಮಾತೃಶಕ್ತಿ ಸಂಗಮಕಾರ್ಯಕ್ರಮವನ್ನ್ನು ಹಮ್ಮಿಕೊಳ್ಳಲಾಯಿತು. ದಕ್ಷಿಣಕನ್ನಡ, ಉಡುಪಿ, ಕಾಸರಗೋಡುಜಿಲ್ಲೆಯಎಲ್ಲಾತಾಲೂಕಿನ 580 ಜನ ಮಾತೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅರಶಿನ-ಕುಂಕುಮ ಮತ್ತು ಹೂವನ್ನುಕೊಡುವುದರ ಮೂಲಕ ಗುರುಕುಲದ ವಿದ್ಯಾರ್ಥಿನಿಯರುಎಲ್ಲಾ ಮಾತೆಯರನ್ನು ಸ್ವಾಗತಿಸಿದರು.

10 ಗಂಟೆಯಉದ್ಘಾಟನೆಯ ಸಂದರ್ಭದಲ್ಲಿಅತಿಥಿಗಳನ್ನು ಪೂರ್ಣಕುಂಭದೊಂದಿಗೆವೇದಿಕೆಗೆ ಸ್ವಾಗತಿಸಲಾಯಿತು. ಗುರುಕುಲದಲ್ಲಿ ಸಂಗೀತ ಶಿಕ್ಷಕಿಯಾದ ವಿದುಷಿ ಶ್ರೀಮತಿ ಪಾರ್ವತಿ ಭಟ್ ಹೊಸಮೂಲೆ ಇವರ ಪ್ರಾರ್ಥನೆಯೊಂದಿಗೆಕಾರ್ಯಕ್ರಮಆರಂಭಗೊಂಡಿತು.ಮಾತೃಶಕ್ತಿ ಸಂಗಮದ ಪ್ರಸ್ತಾವನೆಯನ್ನುಗುರುಕುಲದ ಶ್ರುತಿ ಮಾತೃಶ್ರೀಮಾಡಿದರು. ಪೂರ್ಣಿಮಾ ಮಾತೃಶ್ರೀ ವೇದಿಕೆಯಲ್ಲಿದ್ದಗಣ್ಯರನ್ನು ಪರಿಚಯಿಸಿ ಸ್ವಾಗತಿಸಿದರು. ಪೂಜ್ಯ ಮಾತಾನಂದಮಯೀ, ಗುರುದೇವದತ್ತ ಸಂಸ್ಥಾನ ಒಡಿಯೂರುಇವರು ದೀಪ ಬೆಳಗುವುದರ ಮೂಲಕ ಮಾತೃಶಕ್ತಿ ಸಂಗಮವನ್ನು ಉದ್ಘಾಟಿಸಿ “ಹೆಣ್ಣುಕುಟುಂಬದಕಣ್ಣು, ಹಾಗಾಗಿ ತಾನು ಮೊದಲು ಸುಶಿಕ್ಷಿತಳಾಗಿ ತನ್ನ ಮಕ್ಕಳನ್ನು ಮತ್ತುಕುಟುಂಬವನ್ನು ಸನ್ಮಾರ್ಗದಲ್ಲಿ ಮುನ್ನಡೆಸುವಕರ್ತವ್ಯ ಇವಳ ಮೇಲಿದೆ. ಈ ಕರ್ತವ್ಯದ ಪಾಲನೆಗಾಗಿ ಎಲ್ಲಾ ಮಾತೆಯರುಕಟಿಬದ್ಧರಾಗಿ ಮುನ್ನಡೆದರೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ”ಎಂದುತಮ್ಮಆಶಯವನ್ನುವ್ಯಕ್ತಪಡಿಸುತ್ತಾ, ಮೈತ್ರೇಯೀಗುರುಕುಲವು ತನ್ನಆಶಯದಂತೆ ವಿಶ್ವವಿದ್ಯಾನಿಲಯವಾಗಿ ಅರಳಿ ನಿಲ್ಲಲಿಎಂದು ಆಶೀರ್ವದಿಸಿದರು.ಸಾಯಿರಶ್ಮಿ ಮಾತೃಶ್ರೀ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನಾ ಸಮಾರಂಭದ ನಂತರನಡೆದಮೂರು ಗೋಷ್ಠಿಗಳಲ್ಲಿ ಮಾತೆಯರುತಮ್ಮಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಬೆಂಗಳೂರಿನ ದಿಶಾ ಚಾರಿಟೇಬಲ್ ಟ್ರಸ್ಟ್‍ನ ಸಂಸ್ಥಾಪಕರು ಮತ್ತು ಕಾರ್ಯದರ್ಶಿಗಳಾದ ಶ್ರೀಮತಿ ರೇಖಾರಾಮಚಂದ್ರನ್‍ಅವರು ಶಿಕ್ಷಣ ಗೋಷ್ಠಿಯನ್ನು ನಡೆಸಿಕೊಟ್ಟರು.ಈ ಗೋಷ್ಠಿಯಲ್ಲಿ ಶೈಕ್ಷಣಿಕಕ್ಷೇತ್ರದಲ್ಲಿಕಾರ್ಯ ನಿರ್ವಹಿಸುತ್ತಿರುವ ಮಾತೆಯರು ಭಾಗವಹಿಸಿದ್ದರು.ರಾಷ್ಟ್ರೀಯ ಸ್ವಯಂಸೇವಕಸಂಘದ ಪ್ರಕಲ್ಪವಾದ ಲಘು ಉದ್ಯೋಗ ಭಾರತಿಯ ಪ್ರಾಂತ ಮಹಿಳಾ ಘಟಕದ ಮುಖ್ಯಸ್ಥೆಯಾದಶ್ರೀಮತಿ ಛಾಯಾ ಬಾಲಚಂದ್ರ ನಾಯಕ್‍ಇವರುಜನಪ್ರತಿನಿದಿಗಳü ಗೋಷ್ಠಿಯನ್ನು ನಡೆಸಿಕೊಟ್ಟರು. ಸಮಾಜದ ವಿವಿಧ ಜವಾಬ್ದಾರಿಗಳನ್ನು ಹೊತ್ತಂತಹ ಮಾತೆಯರು ಈ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.ಎಮ್.ಆರ್.ಪಿ.ಎಲ್ ನಿರ್ದೇಶಕರಲ್ಲಿಒಬ್ಬರೂ, ಹೈಕೋರ್ಟ್ ವಕೀಲರೂಆದ ಸಿ.ಮಂಜುಳಾ ಇವರು ಮೂರನೇ ಗೋಷ್ಠಿಯನ್ನು ನಡೆಸಿಕೊಟ್ಟರು.ಗೃಹಿಣಿಯರು, ಉದ್ಯೋಗಿಗಳು ಮತ್ತುಕಲಾವಿದೆಯರಾದಂತಹ ಮಾತೆಯರು ಈ ಗೋಷ್ಠಿಗಳಲ್ಲಿ ಪಾಲ್ಗೊಂಡರು.

ಈ ಮೂರೂ ಗೋಷ್ಠಿಗಳಲ್ಲಿಯೂ ಗುರುಕುಲ ಶಿಕ್ಷಣವನ್ನು ಮನೆಯಲ್ಲಿ ಮತ್ತು ಸಮಾಜದ ವಿವಿಧ ಸಂಘಟನೆಗಳಲ್ಲಿ ಹೇಗೆ ರೂಢಿಸಿಕೊಳ್ಳಬಹುದು ಹಾಗೂ ಗುರುಕುಲವನ್ನು ವಿಶ್ವವಿದ್ಯಾಲಯವನ್ನಾಗಿಸುವಲ್ಲಿ ವೈಯಕ್ತಿಕವಾಗಿ ಹೇಗೆ ಸಹಕರಿಸಬಹುದು ಎಂಬ ವಿಷಯಗಳ ಕುರಿತುಚರ್ಚೆ ನಡೆಯಿತು.ಪ್ರತಿ ಗೋಷ್ಠಿಯಲ್ಲೂಉತ್ತಮ ಪ್ರತಿಕ್ರಿಯೆಕಂಡುಬಂದಿತು ಮತ್ತು ಪ್ರತಿ ಗುಂಪಿನವರು ವಿವಿಧ ಆಯಾಮಗಳಲ್ಲಿ ಜ್ಞಾನ, ಅನುಭವ, ಜನ, ಧನ-ಧಾನ್ಯ, ಗ್ರಂಥ ಸಂಪತ್ತನ್ನು ಸಂಗ್ರಹಿಸಿ ಗುರುಕುಲಕ್ಕೆಕೊಡುವುದರ ಮೂಲಕ ಗುರುಕುಲದೊಂದಿಗೆ ಸಹಕರಿಸುತ್ತೇವೆ ಎಂಬ ನಿರ್ಣಯವನ್ನುಕೈಗೊಂಡರು.

ಭೋಜನ ವಿರಾಮದ ನಂತರಪಂಚಮುಖೀ ಶಿಕ್ಷಣದ ಪರಿಚಯನ್ನೊಳಗೊಂಡ ಗುರುಕುಲ ದರ್ಶನಮ್ ಎಂಬ ನೃತ್ಯ-ನಾಟಕವನ್ನುಗುರುಕುಲದ ವಿದ್ಯಾರ್ಥಿನಿಯರು ಪ್ರಸ್ತುತಪಡಿಸಿದರು.ಕೊನೆಯಲ್ಲಿ ಮಾತೃವೃಂದಕ್ಕೆ ನೃತ್ಯ ನಮನವನ್ನು ಸಲ್ಲಿಸುತ್ತಾ ಬಂದಂತಹ ಮಾತೃಶಕ್ತಿಗೆ ವಂದಿಸಿದರು.

ಕಾರ್ಯಕ್ರಮದಕೊನೆಯಘಟ್ಟವಾದ ಸಮಾರೋಪವುತಮಿಳುನಾಡಿನ ಕರೂರಿನ ಶಾರದಾ ನಿಕೇತನಂ ಮಹಿಳಾ ಮಹಾವಿದ್ಯಾಲಯದ ಕಾರ್ಯದರ್ಶಿಗಳಾದ ಸಾದ್ವಿಪೂಜ್ಯಯತೀಶ್ವರಿ ನೀಲಕಂಠ ಅಂಬಾಇವರಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಮೂರೂ ಗೋಷ್ಠಿಗಳ ಪ್ರತಿನಿಧಿಗಳು ಗೋಷ್ಠಿಗಳಲ್ಲಿ ಚರ್ಚಿಸಲ್ಪಟ್ಟ ವಿಷಯಗಳನ್ನು ಎಲ್ಲರಮುಂದೆ ಪ್ರಸ್ತುತ ಪಡಿಸಿದರು.ಶ್ರೀಮತಿ ರೇಖಾರಾಮಚಂದ್ರನ್‍ಇವರುಅಭ್ಯಾಗತರಾಗಿ ಉಪಸ್ಥಿತರಿದ್ದು “ಜೀವನ ನಡೆಸುವದಕ್ಕೆ ಹಣವೂ ಬೇಕಾಗಿರುವುದೇಹೊರತು ಹಣವೇ ಬೇಕಾಗಿರುವುದಲ್ಲ. ಇದನ್ನು ಸರಿಯಾಗಿಅರ್ಥ ಮಾಡಿಕೊಂಡುಜೀವನಕ್ಕೊಂದುಧ್ಯೇಯವನ್ನಿಟ್ಟುಕೊಂಡು ಆ ಧ್ಯೇಯದತ್ತ ಸಾಗಬೇಕು.ಹೆಣ್ಣು ಮಗಳಾಗಿ ಹುಟ್ಟಿದ ನನ್ನಜೀವನ ಸಾರ್ಥಕವಾಯಿತು ಎಂಬ ಧನ್ಯತೆ ನಮ್ಮಲ್ಲಿ ಮೂಡಬೇಕು”ಎಂದು ಆಶಿಸಿದರು.ಅರ್ಧಮಂಡಲೋತ್ಸವ ಸಮಿತಿಯಉಪಾಧ್ಯಕ್ಷೆಯಾದಡಾ|| ಸುಧಾ ಪುತ್ತೂರುಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಹಿಳೆಯರಾದ ನಾವು ಗುರುಕುಲಕ್ಕೆ ಹೇಗೆ ಸಹಕರಿಸಬಹುದುಎಂದುತಮ್ಮಕಾರ್ಯಾನುಭವದ ಮೂಲಕ ಮನದಟ್ಟು ಮಾಡಿದರು.ಅಧ್ಯಕ್ಷ ಸ್ಥಾನದಲ್ಲಿದ್ದ ಪೂಜ್ಯಯತೀಶ್ವರಿ ನೀಲಕಂಠ ಅಂಬಾ ಇವರು“ಮಗುವಿನ ಗರ್ಭಾವಸ್ಥೆಯಿಂದಲೇತಾಯಿಯಆಶ್ರಯದಲ್ಲಿ ಮಗು ಸಾಂಸ್ಕಾರಯುಕ್ತಜೀವನ ಶಿಕ್ಷಣವನ್ನು ಪಡೆದರೆ ಕೇವಲ 9 ವರ್ಷವಲ್ಲ, ಬದಲಾಗಿ 90 ವರ್ಷಗಳ ಕಾಲ ಸ್ವಸ್ಥ ವ್ಯಕ್ತಿಯಾಗಿ ಆ ಮಗು ಬಾಳಬಹುದು.ಈ ನಿಟ್ಟಿನಲ್ಲಿ ಮಾತೆಯರ ಪ್ರಯತ್ನ ಸಾಗಬೇಕು”ಎಂದುಕರೆಕೊಟ್ಟರು.ಸಮಾರೋಪದ ಸಂದರ್ಭದಲ್ಲಿ ಶ್ರೀಮತಿ ಸಾಯಿಗೀತಾಇವರು ವೇದಿಕೆಯಲ್ಲಿದ್ದಗಣ್ಯರನ್ನು ಪರಿಚಯಿಸಿ ಸ್ವಾಗತಿಸಿದರು.ಶ್ರೀಮತಿ ಹರಿಣಿ ಪುತ್ತೂರಾಯಇವರು ವಂದಿಸಿದರು.ಶ್ರೀಮತಿ ಯಶೋದಾರಾಮಚಂದ್ರಇವರುಕಾರ್ಯಕ್ರಮ ನಿರೂಪಿಸಿದರು.ಶ್ರೀಮತಿ ಶ್ರೀದೇವಿ ಗರ್ತಿಕೆರೆಇವರ ಪ್ರಾರ್ಥನೆಯೊಂದಿಗೆಆರಂಭಗೊಂಡಕಾರ್ಯಕ್ರಮವುವೈದಿಕ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.